ಸರಿ ಕುಯ್ಯ್ದಿದ್ಧು ಸಾಕು, ಈ ಬ್ಲಾಗ್ ನಲ್ಲಿ ಅಲ್ಪ ಸ್ವಲ್ಪ ಆರ್ಥಿಕ ವಿಷಯದ ಬಗ್ಗೆ ಬರಿಯಲು ಪ್ರಯತ್ನಿಸುತ್ತೇನೆ. ನಾನೇನು ಅರ್ಥಶಾಸ್ತ್ರದಲ್ಲಿ ಪರಿಣತಿ ಪಡೆದಿಲ್ಲ, ಆದ್ದರಿಂದ ಈ ಲೇಖನವು ಒಬ್ಬ ಅಮೆತ್ಯೂರ್ ಅರ್ಥಶಾಸ್ತ್ರಜ್ಞ ಬರೆದಿರುವುದೆಂದು ಗಣಿಸಿ.
ನನಗೆ ಇತ್ತೀಚಿನ ದಿನಗಳಲ್ಲಿ ಗ್ಲೋಬಲ್ ಮೇಲ್ಟ್ಡೌನ್ ಎಂಬ ಪದ ಕೇಳಿ ಕೇಳಿ ಸಾಕಾಗಿದೆ. ಒಳ್ಳೆ ಹುಳು ತರ ಒಂದು ವಿಷ್ಯ ಕಾಡ್ತಾ ಇದೆ, ಅದೇನಪ್ಪ ಅಂದ್ರೆ, ಈ ಪಾಶ್ಯಾಥ್ಯ ದೇಶಗಳು ಅಷ್ಟೊಂದು ಮುಂದುವರೆದಿದ್ದರು ಯಾಕೆ ಪದೇ ಪದೇ ಈ ತರ ಹಣಕಾಸಿನ ಸಮಸ್ಯೆ ತಲೆದೋರುತ್ತಿದೆ. ಅಷ್ಟೊಂದು ಶ್ರೀಮಂತ ರಾಷ್ಟ್ರಗಳು ಯಾಕೆ ಈತರಹ ಸಂಕಷ್ಟದ ಪರಿಸ್ತಿತಿಯಲ್ಲಿ ಸಿಲುಕುತ್ತಿದ್ದಾರೆ. ಎಲ್ಲೆಲ್ಲಿ ನೋದ್ದಿದ್ರು "Growth Markets" ರಾರಾಜಿಸುತ್ತಿದೆ . ಇದರಿಂದ ಚೀನಾ ಇಂಡಿಯಾ ಬ್ರಜಿಲ್ ಗೆ ಎಲ್ಲಿಲ್ಲದ ಬೇಡಿಕೆ ಬಂದಂತಾಗಿದೆ. ಇನ್ನ ಮುಂದೆ ಬೆಳವಣಿಗೆ ಏನೇ ಇದ್ರೂ ಇಂಡಿಯಾ ಚೀನಾ ದಲ್ಲಿ ಮಾತ್ರ ಎಂದೆಲ್ಲಾ ತಿಳಿದವರು ಹೇಳುತ್ತಿರುತ್ತಾರೆ. ನೀವು ಈ ವಾಕ್ಯಗಳನ್ನು ನಿಮ್ಮ ನಿಮ್ಮ ಕಂಪೆನಿಗಳಲ್ಲಿ ಕೇಳ್ತಾನೆ ಇರಬಹದು. ಈ ವಾಕ್ಯದ ಅರ್ಥ ಆ ದೇಶಗಳಲ್ಲಿ ಬೆಳವಣಿಗೆ ಅಷ್ಟು ವೇಗದಲ್ಲಿ ನಡಿತಿಲ್ಲವೇನೋ .
ಬೆಳವಣಿಗೆಗೆ ಮುಖ್ಯವಾದ ಅಂಶ ಅಂದ್ರೆ ಕೈಗಾರಿಕೊದ್ಯಮೆ ವೇಗವಾಗಿ ಬೆಳಿಯಬೇಕು. ಫ್ಯಾಕ್ಟರಿಗಳು ಬೆಳಿಯಬೇಕು ಅಂದ್ರೆ ಅವುಗಳು ತಯಾರಿಸುವ ಪದಾರ್ಥಗಳನ್ನು ಯತ್ಥೆಚ್ಚವಾಗಿ ಕೊಂದುಕೊಳ್ಳುವರು ಇರಬೇಕು. ಜನರು ತಮ್ಮ ಹತ್ತಿರ ಇಲ್ಲದಿರುವ ಪದಾರ್ಥಗಳನ್ನು ಕೊಳ್ಳುತ್ತಾರೆ. ಉದಾಹರಣೆಗೆ ಟಿವಿ, ಫ್ರಿಡ್ಜು , ವಾಶಿಂಗ್ ಮಷಿನು ಇತ್ಯಾದಿ. ಈ ಪದಾರ್ಥಗಳು ಕೇವಲ ಉದಾಹರಣೆ, ಈ ವಸ್ತುಗಳ ಬದಲಾಗಿ ಯಾವುದೇ ಮಾರಾಟವಾಗುವ ವಸ್ತುಗಳನ್ನ ಊಹಿಸಬಹುದು. ನಮಗೆಲ್ಲ ತಿಳಿದಿರೋ ಹಾಗೆ ಈ ದೇಶಗಳು ಪ್ರಗತಿಹೊಂದಿದ ದೇಶಗಳು. ಎಲ್ಲರೂ ಪ್ರಾಯಶಃ ಶ್ರೀಮಂತರೇ , ಅವೆರೆಲ್ಲರ ಹತ್ತಿರ ಆಗಲೇ ಈ ಎಲ್ಲ ಅಗತ್ಯ ವಸ್ತುಗಳು ಇವೆ. ಆದುದರಿಂದ ಕೈಗಾರಿಕೋದ್ಯಮ ತಯಾರಿಸುವ ಪದಾರ್ಥಗಳನ್ನು ಕೊಳ್ಳುವವರಿಲ್ಲದೆ ಅಷ್ಟೊಂದು ಬೇಡಿಕೆ ಇಲ್ಲವೇನೋ. ಮುಂಚೆ ಹೇಳಿರುವ ಪದಾರ್ಥಗಳು ಉದಾಹರಣೆಗೆ ಮಾತ್ರ. ಹಾಗಾಗಿ ಅಲ್ಲಿನ ಕೈಗಾರಿಕೆಗಳ ಬೆಳವಣಿಗೆ ಕುಂದಿರಬಹುದು.
ಅದೇನೋ ಸರಿ ಆ ದೇಶಗಳ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಆಗ್ತಾ ಇರಬಹುದು , ಆದರೆ ಈ ಚೀನಾ ಭಾರತ ದೇಶಗಳಿಗೆ ಯಾಕೆ ಎಲ್ಲಿಲ್ಲದ ಮಹತ್ವ? ಒಂದು ಪ್ರಮುಖವಾದ ವಿಷ್ಯ ಅಂದ್ರೆ ಈ ದೇಶಗಳ ಜನಸಂಖ್ಯೆ ಅತಿ ಹೆಚ್ಚು. ಆಯಿತು ಒಪ್ಕೊಂತಿನಿ, ಆದ್ರೆ ಬೇರೆ ಏನೋ ವಿಷಯ ಇರ್ಬೇಕು ಅನ್ನಿಸ್ತಾ ಇದೆ. ನನಿಗೆ ಅನ್ಸತ್ತೆ ಈ ದೇಶಗಳ ಜನರು ಇವಾಗ ನಿಧಾನ ಗತಿಯಲ್ಲಿ ಶ್ರೀಮಂತರಾಗ್ತೈದಾರೆ . ಅದಕ್ಕೆ ಇವಾಗ ತಮಗೆ ಅಗತ್ಯವಾದ ವಸ್ತುಗಳನ್ನ ಕೊಂಡುಕೊಳ್ತಾ ಇದಾರೆ. ಹಾಗಾಗಿ ಇಲ್ಲಿ ಕೈಗಾರಿಕಾ ವಸ್ತುಗಳಿಗೆ ಬೇಡಿಕೆ ಜಾಸ್ತಿ, ಪರಿಣಾಮವಾಗಿ ಉದ್ಯಮ ಬೆಳೆಯಕ್ಕೆ ಅವಕಾಶ ಚೆನ್ನಾಗಿದೆ. ಹಾಗಾಗಿ ಇಲ್ಲಿ ಹಣ ಕೈ ಬದಲಿಸುತ್ತಿರುತ್ತದೆ , ಎಲ್ಲರಿಗೂ ಹಣಗಳಿಸಲು ಅವಕಾಶವಿದೆ. ಈ ಕಾರಣ "Growth Markets" ರಾಷ್ಟ್ರಗಳು "happening" ಅನಿಸಿಕೊಳ್ಳುತ್ತಿವೆ. ಮುಂದಿನ ಹಲವಾರು ವರ್ಷಗಳಲ್ಲಿ ಈ ರಾಷ್ಟ್ರಗಳು ಸಹ ಪಾಶ್ಚಾತ್ಯ ದೇಶಗಳ ಹಾದಿಯನ್ನೆ ಹಿಡಿಯಬಹುದು. ಇದನ್ನು ಯಾರೂ ಅರಿಯರು.
ಹಾಗಾದರೆ ಇದಕ್ಕೆ ಪರಿಹಾರವಿಲ್ಲವೆ? ಯಾರೂ ಸಹ ಪರಿಪಕ್ವವಾದ ಪರಿಹಾರ ಹೇಳಲಾರರು , ಆದರೆ ಒಂದು ದೇಶ ಸತತವಾಗಿ ಹೊಸ ಆವ್ರಿಷ್ಕಾರ (innovation) ಗೆ ಒತ್ತು ಕೊಟ್ಟರೆ , ಅದರಿಂದ ಮಾರುಕಟ್ಟೆಗೆ ಹೊಸ ಪದಾರ್ಥಗಳು ಹೊಸ ಸೇವೆಗಳು ಲಭ್ಯವಾಗುತ್ತದೆ . ಜನರು ಆ ವಸ್ತುಗಳನ್ನು ಕೊಳ್ಳುತ್ತಾರೆ , ಇದರಿಂದ ಕೈಗಾರಿಕೆಗಳಿಗೆ ಅವಕಾಶ ಸಿಗುತ್ತದೆ , ಮೇಲೆ ಹೇಳಿದಂತೆ ಹಣ ಕೈ ಬದಲಿಸುತ್ತದೆ , ಹಣ ಚಲಾವಣೆಯಿಂದ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತದೆ , ಸ್ಥೈರ್ಯಗೊಳ್ಳುತ್ತದೆ. ಇದರ ಜೊತೆ ಇನ್ನೊಂದು ಪರಿಹಾರವೆಂದರೆ, ರಾಷ್ಟ್ರಗಳು ತಮ್ಮ ವ್ಯಾಪಾರಗಳನ್ನು ಬಡ ರಾಷ್ಟ್ರಗಳು , ಅಭಿವ್ರಿದ್ಧಿಹೊಂದುತ್ತಿರುವ ದೇಶಗಳೊಡನೆ ಬೆಳೆಸುವುದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ.
ಈ ಲೇಖನದ ಸಹಾಯದಿಂದ ನಾನು ಕನ್ನಡದಲ್ಲಿ ಬರಿಯುವ ಸಣ್ಣ ಪ್ರಯತ್ನ ಮಾಡಿರುವೆ ಅಷ್ಟೇ. ತಪ್ಪಿದ್ದರೆ ನನ್ನನ್ನು ತಿದ್ದಿ :). ಇದನ್ನು ಕನ್ನಡ ರಾಜ್ಯೋತ್ಸವದ ದಿನದಂದು ಪ್ರಕಟಿಸುತ್ತಿರುವುದು ಕಾಕತಾಳಿಯವಷ್ಟೇ.
ಶುಭಮಸ್ತು . ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. ಜೈ ಕರ್ನಾಟಕ ಮಾತೆ :)